ಮಂಗಳೂರು,ಮಾ.01 ; ಮಂಗಳೂರಿನಲ್ಲಿ ನಿರಂತರ ವಿದ್ಯುತ್ ನೀಡುವಲ್ಲಿ ಬಿಜೆಪಿ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ನಗರದ ಮೆಸ್ಕಾಂ ನ ಕೇಂದ್ರ ಕಛೇರಿ ಎದುರು ಸಿಪಿಐ(ಎಮ್) ಮಂಗಳೂರು ನಗರ ಸಮಿತಿ ವತಿಯಿಂದ ಪ್ರತಿಭಟನಾ ಪರ್ದರ್ಶನವು ಇಂದು ನಡೆಯಿತು.
ವಿಧ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಈ ಸಂದರ್ಭದಲ್ಲಿ ನಿರಂತರ ವಿದ್ಯುತ್ ಕಡಿತ ಮಾಡುತ್ತಿರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತ ಪಡಿಸಿದ ಸಿಪಿಐ(ಎಮ್) ಮುಖಂಡ ಸುನೀಲ್ ಕುಮಾರ್ ಬಜಾಲ್ ಅವರು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಜನತೆ ಕತ್ತಲಿನಲ್ಲಿ ಇರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಶ್ರೀಮಂತರು ತಮಗೆ ಬೇಕಾದ (ಜನರೇಟರ್, ಯುಪಿಎಸ್.) ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಬಡವರ ಪಾಲಿಗೆ ಮಾತ್ರ ಕತ್ತಲು ಶಾಶ್ಚತವಾಗಿದೆ ಎಂದು ಅರೋಪಿಸಿದರು.
ಮೆಸ್ಕಾಂ ಇಲಾಖೆಯು ತಕ್ಷಣ ನಿರಂತರ ವಿದ್ಯುತ್ ಕಡಿತವನ್ನು ನಿಲ್ಲಿಸಿದ್ದಾರೆ ಮುಂದಿನ ದಿನಗಳಲ್ಲಿ ಮೆಸ್ಕಾಂ ಕಛೇರಿ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು..